ಪೃಥ್ವಿ ಅಂಬಾರ್ ಇವರು ಭಾರತೀಯ ನಟ. ಇವರು ಪ್ರಧಾನವಾಗಿ ಕನ್ನಡ ಮತ್ತು ತುಳು ಚಲನಚಿತ್ರೋದ್ಯಮಗಳಲ್ಲಿ ನಟಿಸುತ್ತಿದ್ದಾರೆ, ಮಂಗಳೂರಿನಲ್ಲಿ ರೇಡಿಯೊ ಜಾಕಿಯಾಗಿಯೂ ಕೆಲಸ ಮಾಡುತ್ತಿದ್ದರು. ಇವರು ೨೦೧೪ ರಲ್ಲಿ ಬಿಡುಗಡೆಯಾದ ಬರ್ಕೆ ಎಂಬ ತುಳು ಚಲನಚಿತ್ರದ ಮೂಲಕ ದೊಡ್ಡ ಪರದೆಗೆ ಪ್ರವೇಶ ಮಾಡಿದರು. ಅವರ ಎರಡನೆಯ ಚಿತ್ರ ಬ್ಲಾಕ್ ಬಸ್ಟರ್ ಪಿಲಿಬೈಲ್ ಯಮುನಕ್ಕ, ಇದನ್ನು ಕೆ. ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಸಿನೆಮಾ "ದಿಯಾ"ದಲ್ಲಿ ಮುಖ್ಯ ಪಾತ್ರದಲ್ಲಿ ಹಾಗೂ ಕನ್ನಡ ಧಾರವಾಹಿ "ಜೊತೆ ಜೊತೆಯಲಿ"ಯಲ್ಲಿ 'ನೀಲ್' ಪಾತ್ರದಲ್ಲಿ ಇವರು ನಟಿಸಿದ್ದಾರೆ. ಇವರು ಪಿಲಿಬೈಲ್ ಯಮುನಕ್ಕ ,ಪಮ್ಮಣ್ಣೆ ದಿ ಗ್ರೇಟ್ , ಗೋಲ್ ಮಾಲ್ , 2 ಎಕ್ರೆ , ಇಂಗ್ಲಿಷ್ , ಆಟಿಡೊಂಜಿ ದಿನ , ಎನ್ನ , ಕುದುಕನ ಮದಿಮೆ ಎಂಬ ತುಳು ಹಾಗೂ ರಾಜರು , ಡಿ.ಕೆ ಬೋಸ್ , ದಿಯಾ ಎಂಬ ಕನ್ನಡ ಚಲನಚಿತ್ರಗಳಲ್ಲಿ ಮುಖ್ಯ ಪಾತ್ರ ವಹಿಸಿ ನಟಿಸಿದ್ದಾರೆ. == ಜನನ,ಜೀವನ ಮತ್ತು ಶಿಕ್ಷಣ == ಪೃಥ್ವಿ ಇವರು ೧೭ ನೇ ಆಗಸ್ಟ್ ೧೯೮೮ ರಂದು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಇವರು ಉಡುಪಿಯ ಕಾಪುವಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು . ನಂತರ ಕಾಪುವಿನ ದಂಡತಿರ್ಥ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದರು. ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದು, ಮಾಸ್ ಕಮ್ಯುನಿಕೇಷನ್ ನಲ್ಲಿ ಪದವಿ ಪಡೆಯಲು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸೇರಿದರು. == ವೃತ್ತಿಜೀವನ == ಇವರು ಮಂಗಳೂರಿನಲ್ಲಿ ಆರ್.ಜೆ. ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಇವರು ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಇವರು ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯ ಆರ್.ಜೆ. ಇವರು ಆರ್.ಜೆ. ನಾಗರಾಜ್ ಎಂದು ಜನಪ್ರಿಯರಾಗಿದ್ದರು. ಇವರು ೨೦೧೪ ರಲ್ಲಿ ಬರ್ಕೆ ಎಂಬ ತುಳು ಸಿನಿಮಾದ ಮೂಲಕ ದೊಡ್ಡ ಪರದೆಗೆ ಪಾದಾರ್ಪಿಸಿದರು. ೨೦೧೬ ರಲ್ಲಿ ಇವರು ಕೆ.ಸೂರಜ್ ಶೆಟ್ಟಿಯವರ ಎರಡನೇ ತುಳು ಚಿತ್ರ ಪಿಲಿಬೈಲ್ ಯಮುನಕ್ಕ ದಲ್ಲಿ ಸೋನಲ್ ಮೊಂಟಿರೊ ಅವರೊಂದಿಗೆ ನಟಿಸಿದರು. ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ತುಳು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಮುರಿಯಿತು. ನಂತರ ಇವರು ಹಲವಾರು ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರು. == ವೈಯಕ್ತಿಕ ಜೀವನ == ಪೃಥ್ವಿ ಅಂಬಾರ್ ತಮ್ಮ ಗೆಳತಿ ಪಾರುಲ್ ಶುಕ್ಲಾ ಅವರನ್ನು ೨೦೧೯ ರ ನವೆಂಬರ್ ೩ ರಂದು ಮಂಗಳೂರಿನಲ್ಲಿ ವಿವಾಹವಾದರು. == ಧಾರಾವಾಹಿ/ಚಿತ್ರಗಳ ಪಟ್ಟಿ == === ಅಭಿನಯಿಸಿದ ಧಾರಾವಾಹಿಗಳು === === ಅಭಿನಯಿಸಿದ ತುಳು ಚಲನಚಿತ್ರಗಳು === === ಅಭಿನಯಿಸಿದ ಕನ್ನಡ ಚಲನಚಿತ್ರಗಳು === == ನಾಮನಿರ್ದೇಶನ ಮತ್ತು ಪ್ರಶಸ್ತಿಗಳು == == ಉಲ್ಲೇಖಗಳು ==